ಕಣಂಜಾರು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ

ಸುದ್ದಿ/ವೃತಾಂತ

ಕಣಂಜಾರು ಉತ್ಸವ

31-12-2025  ಬುಧವಾರ 

ವಾಸ್ತುರಕ್ಷಾ ಕಲಾಪಗಳು, ಮುಹೂರ್ತಬಲಿ, ಮಕ್ಕಳ ವರಸರೆ

01-01-2026   ಗುರುವಾರ 

ಬೆಳಿಗ್ಗೆ :ಗಣಯಾಗ,ಧ್ವಜಾರೋಹಣ

ಮೂಲಬ್ರಹ್ಮಸ್ಥಾನದಲ್ಲಿ ನವಕಪ್ರಧಾನ ಹೋಮ, ಪರಿವಾರ ಪೂಜೆ, ಅನ್ನಸಂತರ್ಪಣೆ

ರಾತ್ರಿ : ರಾಶಿಕಾಯಿ, ನಿತ್ಯಬಲಿ, ಆರಾಧನಾಬಲಿ, ಭೂತಬಲಿ

02-01-2026   ಶುಕ್ರವಾರ

ಮಧ್ಯಾಹ್ನ: ಮಹಾಪೂಜೆ, ವರಸರೆ,ಅನ್ನಸಂತರ್ಪಣೆ

ರಾತ್ರಿ : ನಿತ್ಯಬಲಿ, ತಂಬಿಲ ಪೂಜೆ, ಬ್ರಹ್ಮಮಂಡಲೋತ್ಸವ, ಭೂತಬಲಿ

03-01-2026    ಶನಿವಾರ

ಮಧ್ಯಾಹ್ನ: ಆಶ್ಲೇಷಾಬಲಿ, ಅಂಬೋಡಿ, ಮಹಾಪೂಜೆ, ಅನ್ನಸಂತರ್ಪಣೆ

ರಾತ್ರಿ : ನಿತ್ಯಬಲಿ, ಸ್ವಾರಿಬಲಿ, ಹೂವಿನಪೂಜೆ, ಕೆಂಡಸೇವೆ, ಮಹಾರಂಗಪೂಜೆ, ಭೂತಬಲಿ

04-01-2026   ಆದಿತ್ಯವಾರ

ಮಧ್ಯಾಹ್ನ : ಮಹಾಪೂಜೆ, ಪಲ್ಲಪೂಜೆ, ರಥಾರೋಹಣ, ಅನ್ನಸಂತರ್ಪಣೆ
ರಾತ್ರಿ : ಗಂಟೆ 7.00ರಿಂದ ಶ್ರೀಮನ್ಮಹಾರಥೋತ್ಸವ, ಕೆರೆ ಉತ್ಸವ ಸೇವಾರ್ಥ ವಿಶೇಷ ಹೂವಿನ ಪೂಜೆ, ಮಹಾ ಭೂತಬಲಿ, ಕವಾಟಬಂಧನ

05-01-2026   ಸೋಮವಾರ 

ಬೆಳಿಗ್ಗೆ : ಗಂಟೆ 8.30ಕ್ಕೆ ಕವಾಟೋದ್ಘಾಟನೆ, ದೇವರಿಗೆ ದಶವಿಧ ಸ್ನಾನ,ಮಹಾಪೂಜೆ, ದೇವರ ಸಂದರ್ಶನ, ತುಲಾಭಾರ ಸೇವೆ, ಮಹಾಅನ್ನಸಂತರ್ಪಣೆ

ರಾತ್ರಿ : ಓಕುಳಿ, ಕಟ್ಟೆಪೂಜೆ, ಅವಭೃತ ಸ್ನಾನ, ಧ್ವಜಾವರೋಹಣ

06-01-2026 ಮಂಗಳವಾರ

ಮಧ್ಯಾಹ್ನ : ಮಹಾಸಂಪ್ರೋಕ್ಷಣೆ, ಮಹಾಪೂಜೆ, ಮಹಾಮಂತ್ರಾಕ್ಷತೆ, ಅನ್ನಸಂತರ್ಪಣೆ

ರಾತ್ರಿ : ಮೇಲ್ಬಂಟ ಪೂಜೆ, ಗಣಾರಾಧನೆ, ಪ್ರಸಾದ ವಿತರಣೆ

07-01-2026 ಬುಧವಾರ 

ಮಧ್ಯಾಹ್ನ : ಮಹಾಪೂಜೆ, ಮಾರಿಪೂಜೆ, ಮಾರಿ ಸಂತರ್ಪಣೆ

ಸಂಜೆ : ಮೇಲ್ಬಂಟ ಸ್ಥಾನದಲ್ಲಿ ಸಂಪ್ರೋಕ್ಷಣೆ

ರಾತ್ರಿ : ಮಾರಿಪೂಜೆ, ದೀಪಾರಾಧನೆ, ಮಾರಿಬಲಿ

 

Be a member of shashwatha puja seva samithi for performing puja on permanent basis on any of your special occasions and get the blessings of Lord Brahmalingeshwara .

 

Annasantharpane(mass feast) is arranged daily during annual uthsav. Proposal is on for starting annasantharpane on every sankramana day. Contribute generously for annasantharpana nidhi.


Payments/Donations may be credited to temples savings account no:01962200002816 IFSC code : CNRB0010196 with Canara Bank Kanajar.

ನಕ್ಷೆ

ದಕ್ಷಿಣ ಕನ್ನಡ ಮತ್ತು ಉಡುಪಿಯೆಂಬ 'ನಾಗ' ನನ್ನು ಧಾರ್ಮಿಕವಾಗಿ ಆರಾಧಿಸಲ್ಪಡುವ ಈ ಪವಿತ್ರ ಮಣ್ಣಿನಲ್ಲಿ ಸರ್ಕಾರಿ ದಾಖಲೆಗಳ ಪ್ರಕಾರ 1600 ದೇವಸ್ಥಾನಗಳಿವೆ. ಬೇರೆ - ಬೇರೆ ದೈವ ಮತ್ತು ದೇವರುಗಳನ್ನು ಆರಾಧಿಸುವ ಈ ಮಣ್ಣಿನಲ್ಲಿ ಕಣಂಜಾರು ಬ್ರಹ್ಮಲಿಂಗೇಶ್ವರನ ಕಥೆಯು ತುಂಬಾ ಪ್ರಾಮುಖ್ಯತೆ ಮತ್ತು ಪಾವಿತ್ರತೆ ಪಡೆದಿದೆ. 'ಕಣಂಜಾರ 'ನ್ನು, 'ಕಣಜಾರು ' ಎಂದೂ ಕರೆಯಬಹುದು.

ವ್ಯಕ್ತಿ ಉಡುಪಿಯಿಂದ ದೇವಸ್ಥಾನಕ್ಕೆ ಬರುವುದಾದರೆ, ಆತ ಉಡುಪಿ - ಹಿರಿಯಡ್ಕ - ಕಾರ್ಕಳ ಮಾರ್ಗವಾಗಿ ಬರಬೇಕು. ಮತ್ತು ಗುಡ್ಡೆಯಂಗಡಿಯಲ್ಲಿ (ಹಿರಿಯಡ್ಕದ ನಂತರ) ಬಲಭಾಗದಲ್ಲಿ ಸಿಗುವ ದ್ವಾರದ ಮೂಲಕ ಕಣಂಜಾರಿಗೆ ಬರಬಹುದು. ದ್ವಾರದಿಂದ ಮೂರು ಕಿ. ಮೀ ದೂರದಲ್ಲಿ ದೇವಸ್ಥಾನವಿದೆ. ಮತ್ತೊಂದು ರಸ್ತೆಯ ಮೂಲಕ ಕೂಡ ದೇವಸ್ಥಾನಕ್ಕೆ ಬರಬಹುದು. ಆತ ಉಡುಪಿ - ಪಳ್ಳಿ - ಬೈಲೂರು - ಕಾರ್ಕಳ ಮಾರ್ಗವಾಗಿ ಬರಬೇಕು. ಕಣಂಜಾರು ಚರ್ಚಿನ ಹತ್ತಿರ ಸಿಗುವ ಎಡಭಾಗದ ದ್ವಾರದ ಮೂಲಕ ಪ್ರವೇಶಿಸಬೇಕು. ಇಲ್ಲಿಂದ ಮೂರು ಕಿ. ಮೀ. ಸಂಚರಿಸಿದರೆ ದೇವಸ್ಥಾನ ಸಿಗುತ್ತದೆ.

ದೇವಸ್ಥಾನದ ದಾರಿ ಮಧ್ಯೆ, ಯಾವುದೇ ಆಧುನೀಕರಣದ ಪ್ರಭಾವಕ್ಕೆ ಒಳಗಾಗದೆ ಇರುವ ಹಸಿರಿನಿಂದ ಕಂಗೊಳಿಸುವ ಪ್ರಕೃತಿ ಹಾಗೂ ಬೆಟ್ಟ- ಗುಡ್ಡಗಳು ಪ್ರಯಾಣಿಕರನ್ನು ಮಂತ್ರಮುಗ್ಧಗೊಳಿಸುತ್ತದೆ. ಇಂತಹ ಸುಂದರವಾದ ಪ್ರಕೃತಿಯ ನಡುವೆ ದೇವಸ್ಥಾನವಿದೆ. ದೇವಸ್ಥಾನಕ್ಕೆ ಪ್ರವೇಶಿಸುತ್ತಿದ್ದಂತೆ , ಸುಮಾರು 850 ವರುಷಗಳ ಹಿಂದಿನ ಶಿಲ್ಪಕಲಾ ಸೌಂದರ್ಯವನ್ನು ಕಾಣಬಹುದು.

ದೇವಸ್ಥಾನವು 'ವಾಸ್ತುಶಾಸ್ತ್ರ' ನಿಯಮ ಮತ್ತು 'ವಿನ್ಯಾಸ' ಹೊಂದಿದೆ. 'ಗರ್ಭಗುಡಿ' ಯನ್ನು 'ಚತುರಾಸ್ರ' ಮತ್ತು 'ಗಜಾಯ ಆಯ' ನಿಯಮದ ಪ್ರಕಾರ ನಿರ್ಮಿಸಲಾಗಿದೆ. ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ಎಲ್ಲಾ ದೇವಸ್ಥಾನಗಳಲ್ಲಿ ದೇವರಿಗೆ 'ಸ್ಥಾನ' ವಿರುತ್ತದೆ. ಹಾಗೆಯೇ, ಇಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ ದೇವರು ಪ್ರಧಾನ ದೇವರಾಗಿ ಆರಾಧಿಸಲ್ಪಡುತ್ತಾರೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಶ್ರೀ ವೀರಭದ್ರ, ಶ್ರೀ ಗಣಪತಿ, ಶ್ರೀ ಅನ್ನಪೂರ್ಣೇಶ್ವರಿ, ಮತ್ತು ಶ್ರೀ ಮೇಲ್ಬಂಟ ದೇವರನ್ನು ಆರಾಧಿಸಲಾಗುತ್ತದೆ.